ಟೈಗರ್ ಶ್ರಾಫ್ ಗುಂಡಿನ ದಾಳಿ ಪ್ರಕರಣದಲ್ಲಿ ಮೂವರ ಬಂಧನ! ಸಲ್ಮಾನ್‌ ಖಾನ್‌ ಜೊತೆ ಯಾರೇ ಸೇರಿದರೂ ಮುಗಿಸುತ್ತೇವೆ!! ಬಂಧಿತರ ಹಿನ್ನಲೆ ಏನು ಗೊತ್ತಾ??

ಮುಂಬಯಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣ ಸಂಬಂಧ ಪೊಲೀಸರು ಮೂವರು ಶಂಕಿತ ಶೂಟರ್‌ಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ. ರಾಜಸ್ಥಾನದ ಕೋಟಾದಲ್ಲಿ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಫುಲ್ ಸಿಂಗ್, ಹೃತಿಕ್ ಕುಮಾರ್, ರೆಹಾನ್ ಎನ್ನುವವರನ್ನು ಬಂಧಿಸಿಲಾಗಿದ್ದು, ಇದರಲ್ಲಿ ಇಬ್ಬರು ಹರಿಯಾಣದ ಸೋನಿಪತ್ ಮೂಲದವರಾಗಿದ್ದಾರೆ. ಒಬ್ಬಾತ ಬಿಹಾರದ ಬೇಗುಸರಾಯ್ ಮೂಲದವನು ಎಂದು ತಿಳಿದು ಬಂದಿದೆ.

Advertisement

ಭಾನುವಾರ (ಅ.18) ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಫುಟ್‌ಬಾಲ್ ಆಡಿ ವಾಪಾಸ್ ಆಗುತ್ತಿದ್ದ ವೇಳೆ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮೂವರು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿಯನ್ನು ನಡೆಸಿದ್ದರು. ಈ ಘಟನೆಯಲ್ಲಿ ನಟ ಸೇರಿ ಮೂವರಿಗೆ ಗಾಯವಾಗಿದೆ. ಕೃತ್ಯದ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತಿಕೊಂಡಿದೆ. ಗುಂಡಿನ ದಾಳಿ ಪ್ರಕರಣದ ಬೆನ್ನಲ್ಲೇ, ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್‌ನ ಸಹಚರ ಎಂದು ಹೇಳಿಕೊಂಡಿರುವ ವ್ಯಕ್ತಿಯ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾಳಿಯ ಹೊಣೆಯನ್ನು ಹೊತ್ತು ಕೊಂಡಿರುವ ಈ ಗುಂಪು, ಸಲ್ಮಾನ್ ಖಾನ್ ಜೊತೆ ಗುರುತಿಸಿಕೊಳ್ಳುವವರಿಗೂ ಇದೇ ಗತಿ ಎಂದು ಎಚ್ಚರಿಕೆ ನೀಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

Advertisement
Advertisement

ಬೆದರಿಕೆ ಹಾಕಿರುವ ವ್ಯಕ್ತಿ ತನನ್ನು ಅನಿಲ್ ಪಂಡಿತ್ ಎಂದು ಪರಿಚಯಿಸಿಕೊಂಡಿದ್ದು, ವೈರಲ್ ಆಗಿರುವ ಆಡಿಯೋದಲ್ಲಿ, “ಚಿತ್ರರಂಗದಲ್ಲಿ ನಮ್ಮ ಮಾತನ್ನು ಮೀರಿ ಸಲ್ಮಾನ್ ಖಾನ್ ಜೊತೆ ಸೇರಿ ಕೆಲಸ ಮಾಡುವವರನ್ನು ಮುಗಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದು ಅಲ್ಲದೆ ಆಡಿಯೋದ ಕೊನೆಯಲ್ಲಿ “ಸಬ್ಕಾ ನಂಬರ್ ಆಯೇಗಾ” ಎಂಬ ಬೆದರಿಕೆ ಸಂದೇಶವಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page