ಯುಜಿಸಿ ನೆಟ್‌ 2026 ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ! ಇಲ್ಲಿದೆ ನೋಡಿ ಹೊಸ ಅಪ್ಡೇಟ್!!

ವಿಶ್ವವಿದ್ಯಾಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಎನ್‌ಟಿಎ ಪರಿಷ್ಕರಿಸಿದೆ. ಪರೀಕ್ಷೆ ದಿನಾಂಕ, ಪ್ರವೇಶ ಪತ್ರ ಬಿಡುಗಡೆ, ಪರೀಕ್ಷಾ ಕೇಂದ್ರದ ನಿಯಮಗಳು ಸೇರಿದಂತೆ ಹಲವು ವಿಷಯಗಳಿಗೆ ಹೊಸ ಅಪ್ಡೇಟ್ ನೀಡಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಪರೀಕ್ಷೆಯು ಡಿಸೆಂಬರ್ 14ರಿಂದ 18ರವರೆಗೆ ಹಾಗೂ ಡಿಸೆಂಬರ್ 21ರಂದು ನಡೆಯಲಿದೆ. ಪರೀಕ್ಷಾ ನಗರಗಳ ಮಾಹಿತಿಯು ನವೆಂಬರ್ 23ರಂದು ಪ್ರಕಟವಾಗಲಿದೆ. ಪ್ರವೇಶ ಪತ್ರಗಳನ್ನು ಡಿಸೆಂಬರ್ 7ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

Advertisement

ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ :

Advertisement
Advertisement

ಅರ್ಜಿ ಸಲ್ಲಿಕೆ: ಅಕ್ಟೋಬರ್ 8ರಿಂದ 28ರವರೆಗೆ
ದಂಡದ ಶುಲ್ಕದ ಜೊತೆ ಅರ್ಜಿ ಸಲ್ಲಿಕೆ: ಅಕ್ಟೋಬರ್ 29ರಿಂದ 31ರವರೆಗೆ
ತಡವಾಗಿ ಸಲ್ಲಿಸುವ ಅರ್ಜಿ ಶುಲ್ಕ: ₹500 ಹೆಚ್ಚುವರಿ
ಅರ್ಜಿ ತಿದ್ದುಪಡಿ ಅವಕಾಶ: ನವೆಂಬರ್ 2ರಿಂದ 4ರವರೆಗೆ
ಪ್ರವೇಶ ಪತ್ರ ಬಿಡುಗಡೆ: ಡಿಸೆಂಬರ್ 7ರಿಂದ
ಪರೀಕ್ಷಾ ನಗರಗಳ ಮಾಹಿತಿ ಬಿಡುಗಡೆ: ನವೆಂಬರ್ 23
ಪರೀಕ್ಷಾ ದಿನಾಂಕಗಳು: ಡಿಸೆಂಬರ್ 14ರಿಂದ 18ರವರೆಗೆ ಹಾಗೂ ಡಿಸೆಂಬರ್ 21ರಂದು..

ಹಿಂದಿನ ವೇಳಾಪಟ್ಟಿಯಲ್ಲಿ ಡಿಸೆಂಬರ್ 14ರಿಂದ 19ರವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ಡಿಸೆಂಬರ್ 20 ಮತ್ತು 21ನ್ನು ಹೆಚ್ಚುವರಿ ದಿನಗಳಾಗಿ ಇರಿಸಲಾಗಿತ್ತು. ಈಗ ವೇಳಾಪಟ್ಟಿ ಬದಲಾಗಿದೆ. ಪರೀಕ್ಷೆಯಲ್ಲಿ ಅಂಕ ನೀಡುವ ನಿಯಮದಲ್ಲೂ ಪ್ರಮುಖ ಬದಲಾವಣೆ ತರಲಾಗಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಉತ್ತರಿಸದ, ಗುರುತಿಸದ ಅಥವಾ ಪರಿಶೀಲನೆಗೆ ಗುರುತಿಸಿದ ಪ್ರಶ್ನೆಗಳಿಗೆ ಯಾವುದೇ ಅಂಕ ನೀಡಿರಲಿಲ್ಲ. ಈ ಬಾರಿ ಪರಿಶೀಲನೆಗಾಗಿ ಗುರುತು ಹಾಕಿದ ಪ್ರಶ್ನೆಗಳನ್ನು ಮೌಲ್ಯಮಾಪನದಲ್ಲಿ ಪರಿಗಣಿಸಲಾಗುತ್ತದೆ ಎಂದು ಎನ್‌ಟಿಎ ತಿಳಿಸಿದೆ.

ಸಯುಜಿಸಿ-ನೆಟ್ ಡಿಸೆಂಬ‌ರ್ 2026ರ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವ ಅಭ್ಯರ್ಥಿಗಳು ಪರಿಷ್ಕೃತ ಮಾಹಿತಿ ಪುಸ್ತಕವನ್ನು ಪರಿಶೀಲಿಸಬೇಕು. ವಿಶೇಷವಾಗಿ ಪರೀಕ್ಷಾ ದಿನಾಂಕ, ಪ್ರವೇಶ ಪತ್ರ, ಪರೀಕ್ಷಾ ಕೇಂದ್ರದ ನಿಯಮಗಳು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಗಮನ ಹರಿಸಬೇಕು. ಅಧಿಕೃತ ಮಾಹಿತಿ ಮತ್ತು ಪ್ರವೇಶ ಪತ್ರಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವೆಬ್‌ಸೈಟ್ ugcnet.nta.ac.in ಅನ್ನು ಪರಿಶೀಲಿಸುವುದು ಉತ್ತಮ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page