ಪ್ರತೀ ವರ್ಷ 4.5ಲಕ್ಷ ಯುವತಿಯರು ಹಿಂದೂಯೇತರರ ಜೊತೆಗೆ ಓಡಿಹೋಗುತ್ತಾರೆ! ಬಿಜೆಪಿಯ ಉಷಾ ಠಾಕೂರ್ ವಿವಾದಾತ್ಮಕ ಹೇಳಿಕೆ!!

ಇಂದೋರ್ (ಮಧ್ಯಪ್ರದೇಶ) : ‘ನವರಾತ್ರಿ ಸಮಯದಲ್ಲಿ ಹಮ್ಮಿಕೊಳ್ಳುವ ಗರ್ಬಾನೃತ್ಯದ ವೇಳೆ ದೇಶದಲ್ಲಿ ಪ್ರತಿ ವರ್ಷ 4.5 ಲಕ್ಷ ಹುಡುಗಿಯರು ಹಿಂದೂಯೇತರ ಪುರುಷರೊಂದಿಗೆ ಓಡಿಹೋಗುತ್ತಾರೆ. ಇದು ಜನಸಂಖ್ಯೆ ಸ್ವರೂಪದಲ್ಲಿನ ಬದಲಾವಣೆಗೆ ಕಾರಣವಾಗುತ್ತಿದೆ’ ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕಿ ಉಷಾ ಠಾಕೂರ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಗರ್ಬಾನೃತ್ಯ ನಡೆಯುವ ಪೆಂಡಾಲ್‌ಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಬೇಕು ಎಂಬುದನ್ನು ಸಮರ್ಥಿಸಿಕೊಂಡ ಸಂದರ್ಭದಲ್ಲಿ ಅವರು ಈ ಮಾತು ಹೇಳಿದ್ದಾರೆ.

Advertisement

ಇದರ ಬೆನ್ನಲ್ಲೇ, ಉಷಾ ಠಾಕೂರ್ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷ, ಇದು ಹಿಂದೂ ಮಹಿಳೆಯರ ಅಸ್ಮಿತೆಗೆ ಮಾಡಿದ ಅವಮಾನ ಎಂದಿದೆ. ಇಂತಹ ಹೇಳಿಕೆ ಮೂಲಕ ಉಷಾ ಠಾಕೂರ್ ಅವರು ಹಿಂದೂ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ. ಯಾವುದೇ ಸಾಕ್ಷ್ಯಗಳು ಇಲ್ಲದೆ ಅವರ ಚಾರಿತ್ರ್ಯವಧೆ ಮಾಡುತ್ತಿದ್ದು, ಇಂತಹ ಹೇಳಿಕೆಗಾಗಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು’ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಸಮನ್ವಯಕಾರ ನೀಲಭ್ ಶುಕ್ಲಾ ಆಗ್ರಹಿಸಿದ್ದಾರೆ.
ಉಷಾ ಅವರು ಡಾ. ಅಂಬೇಡ್ಕರ್ ನಗರ–ಮಹೂವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ವಕ್ತಾರರೂ ಆಗಿರುವ ಅವರು, ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page