ಪುತ್ತೂರು: ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಬುಧವಾರ ತಡರಾತ್ರಿ ಪುತ್ತೂರಿಗೆ ಭೇಟಿ ನೀಡಿದರು. ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ಅವರು ಸೆ.17ರಂದು ಮಂಗಳೂರಿನಲ್ಲಿ ನಡೆಯುವ ಮೂಡಾ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನಿಂದ ರಸ್ತೆ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಯತೀಂದ್ರ ಸಿದ್ದರಾಮಯ್ಯ ಅವರು ತಡರಾತ್ರಿ ಕಬಕಕ್ಕೆ ಆಗಮಿಸಿದ ವೇಳೆ ಅವರ ಆಪ್ತ ಗೆಳೆಯ ಪ್ರಹ್ಲಾದ್ ಬೆಳ್ಳಿಪ್ಪಾಡಿ, ತಾಲೂಕು ಅಹಿಂದ ಅಧ್ಯಕ್ಷ ಜುನೈದ್, ಗುತ್ತಿಗೆದಾರ ಕಬಕರ್ಸ್ ಹಾಗೂ ಮಿಥುನ್ ಶೆಟ್ಟಿ ಬರಮಾಡಿಕೊಂಡರು.













