ಮಹಾರಾಷ್ಟ್ರ : ಬಸ್, ಆಟೋ ನಡುವೆ ಭೀಕರ ಅಪಘಾತ, ತುಂಡು ತುಂಡಾಗಿ ಬಿದ್ದ ಆಟೋ, ಶಾಲಾ ಮಕ್ಕಳು ಸೇರಿ ನಾಲ್ವರು ಸಾವು

ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಹಾಗೂ ಆಟೋ ನಡುವೆ ಅಪಘಾತ(Accident) ಸಂಭವಿಸಿದ್ದು, ಶಾಲಾ ಮಕ್ಕಳು ಸೇರಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ವರುದ್-ರಾಜುರಾ ಬಜಾರ್ ರಸ್ತೆಯಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ. ಈ ಭೀಕರ ಅಪಘಾತದ ನಂತರ ಆ ಪ್ರದೇಶದಲ್ಲಿ ಕೋಲಾಹಲ ಉಂಟಾಗಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ, ಅಮರಾವತಿ ಜಿಲ್ಲೆಯ ವರುದ್ ತಾಲೂಕಿನ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು ರಿಕ್ಷಾದಲ್ಲಿ ಕೆಲವು ಸ್ಥಳೀಯ ನಾಗರಿಕರು ಕೂಡ ಇದ್ದರು.

Advertisement

Share this article

You cannot copy content of this page