ವಿಟ್ಲ ಘಟಕದ ಪುತ್ತಿಲ ಸೇವಾ ಟ್ರಸ್ಟ್(ರಿ), ರೋಟರಿ ಕ್ಲಬ್ಪುತ್ತೂರು (EAST), ರೋಟರಿ ಕ್ಲಬ್ವಿಟ್ಲ ಮತ್ತು ಸಮರ್ಪಣ್ವಿಟ್ಲ ಅವರ ಆಶ್ರಯದಲ್ಲಿ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಭ ಟ್ರಸ್ಟ್ (ರಿ.) ದೇರಳಕಟ್ಟೆಯ ನಿಟ್ಟೆ ಜಸ್ಟಿಸ್ ಕೆ.ಯಸ್. ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ, ಯೇನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ಸೆಂಟರ್ಅವರ ಸಹಭಾಗಿತ್ವದೊಂದಿಗೆ “ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ” ಸೆಪ್ಟೆಂಬರ್13 ಭಾನುವಾರ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಸುವರ್ಣ ರಂಗಮಂದಿರದಲ್ಲಿ ಬೆಳಿಗ್ಗೆ 09 ಗಂಟೆಯಿಂದ ಮಧ್ಯಾಹ್ನ 12ಗಂಟೆಯವರೆಗೆ ನಡೆಯಲಿದೆ.
ಶಿಬಿರದಲ್ಲಿ ಕಿವಿ, ಮೂಗು, ಗಂಟಲು ತಪಾಸಣೆ, ಕಣ್ಣು ಪರೀಕ್ಷೆ ಹಾಗೂ ಉಚಿತ ಕನ್ನಡಕ, ದಂತ ಪರೀಕ್ಷೆ ಹಾಗೂ ಚಿಕಿತ್ಸೆ, ಸಕ್ಕರೆ ಕಾಯಿಲೆ ತಪಾಸಣೆ, ಎಲುಬು ಮತ್ತು ಚರ್ಮ ತಪಾಸಣೆ, ಇ.ಸಿ.ಜಿ ಹಾಗೂ ಮಕ್ಕಳ ತಪಾಸಣೆ ವಿಭಾಗ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.












