ದೈನಂದಿನ ವಿಷಯಗಳೇ ಸಂಶೋಧನೆಗೆ ಸಹಕಾರಿ : ಪ್ರೊ| ಡಾ. ಚಿದಾನಂದ ಹೆಚ್.ಎಲ್

ಪುತ್ತೂರು, ಸೆ. ೦೮: ಸಂಶೋಧನೆಯು ಶಿಕ್ಷಣದ ಒಂದು ಭಾಗವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಂಶೋಧನೆ ಎನ್ನುವುದು ಮುಖ್ಯ ಕಾರ್ಯ ನಿರ್ವಹಿಸುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರಲು ಸಹಕಾರಿಯಾಗಿದೆ. ಸಂಶೋಧನೆಗೆ ಕ್ಲಿಷ್ಟಕರ ವಿಷಯಗಳನ್ನೇ ಆಯ್ದುಕೊಳ್ಳಬೇಕೆಂದಿಲ್ಲ. ದೈನಂದಿನ ಜೀವನದಲ್ಲಿ ಸಿಗುವಂತಹ ಯಾವುದೇ ವಿಷಯಗಳನ್ನೂ ಸಹ ಆಯ್ಕೆಮಾಡಿಕೊಳ್ಳಬಹುದು ಎಂದು ಬೆಂಗಳೂರಿನ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಕಾಮರ್ಸ್ ಸಿಎಂಆರ್ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಡಾ. ಚಿದಾನಂದ ಹೆಚ್. ಎಲ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ನಡೆದ ‘ಬಿಲ್ಡಿಂಗ್ ರಿಸರ್ಚ್ ಸ್ಟೋರಿ: ಫ್ರಮ್ ಪ್ರಾಬ್ಲಮ್ ಐಡೆಂಟಿಫಿಕೇಶನ್ ಟು ಡೆಸರ್ಟೇಶನ್’ ಎಂಬ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಮಾತನಾಡುತ್ತಾ, ಸಂಶೋಧನೆ ಎನ್ನುವುದು ಒಂದು ಕನಸು. ವಿದ್ಯಾರ್ಥಿಗಳು ಯಾವಾಗ ಸಂಶೋಧನೆಯನ್ನು ಕಷ್ಟವೆಂದು ಭಾವಿಸುತ್ತಾರೋ ಆಗ ಅದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಸಣ್ಣ ಸಂಶೋಧನೆಗಳಿAದಲೇ ಮುಂದಕ್ಕೆ ಉತ್ತಮ ಸಂಶೋಧನೆಯನ್ನು ಮಾಡಲು ಸಾಧ್ಯವಾಗುವುದು. ಇದು ಅಂಕಗಳಿಗಿAತಲೂ ಮುಖ್ಯವಾಗಿ ಸಂಶೋಧನಾ ಸಂಸ್ಕೃತಿಯನ್ನು ಹೆಚ್ಚಿಸುತ್ತದೆ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳೆಲ್ಲರೂ ತಮ್ಮ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ ಸ್ಥಾನದಲ್ಲಿರಲು ಸಹಕರಿಸುತ್ತದೆ ಎಂದರು.

Advertisement

ಕಾರ್ಯಕ್ರಮವನ್ನು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ ಸ್ವಾಗತಿಸಿ, ದ್ವಿತೀಯ ಎಂ.ಕಾA ವಿಭಾಗದ ವಿದ್ಯಾರ್ಥಿನಿ ಉನ್ನತಿ ವಂದಿಸಿ, ಕೌಸಲ್ಯ ಎನ್ ನಿರೂಪಿಸಿದರು.

Share this article

You cannot copy content of this page