ಪೆರುವಾಯಿಯ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದ ಶ್ರೀ ಕೃಷ್ಣ ಶಾಖೆಯ ಆಶ್ರಯದಲ್ಲಿ ಭಾರತೀಯ ಸೇನೆಯಲ್ಲಿ 23 ವರ್ಷಗಳ ಕಾಲ ಸುದೀರ್ಘ ಹಾಗೂ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ ವೀರ ಯೋಧ ಚಂದ್ರಶೇಖರ ಪೂಜಾರಿ ಕಲ್ಲಡ್ಕ ಪೆರುವಾಯಿ ಅವರಿಗೆ ಹುಟ್ಟೂರ ಸ್ವಾಗತ ಕಾರ್ಯಕ್ರಮ ಸೆಪ್ಟೆಂಬರ್ 13 ಭಾನುವಾರ ಸಂಜೆ 04 ಗಂಟಗೆ ನಡೆಯಲಿದೆ.

ಬೃಹತ್ ವಾಹನ ಜಾಥಾ :
ಕುದ್ದುಪದವುನಿಂದ ಹೊರಟು ಪೆರುವಾಯಿ ಜಂಕ್ಷನ್ ಮೂಲಕ ಪೆರುವಾಯಿ–ಕಲ್ಲಡ್ಕದಲ್ಲಿರುವ ಶ್ರೀ ಚಂದ್ರಶೇಖರ ಪೂಜಾರಿ ಅವರ ನಿವಾಸದವರೆಗೆ ಬೃಹತ್ ವಾಹನ ಜಾಥಾ ಹಾಗೂ ಮೆರವಣಿಗೆ ನಡೆಯಲಿದೆ. ವಾಹನ ಜಾಥಾಕ್ಕೆ ನಿವೃತ್ತ ಶಾಲಾ ಶಿಕ್ಷಕ ರಾಮಯ್ಯ ಶೆಟ್ಟಿ ಮುಕ್ಡಾಪು ಚಾಲನೆ ನೀಡಲಿದ್ದಾರೆ.
23 ವರ್ಷಗಳ ಅಮೂಲ್ಯ ದೇಶ ಸೇವೆ ಸಲ್ಲಿಸಿದ ವೀರ ಯೋಧನಿಗೆ ಅದ್ಧೂರಿ ಹುಟ್ಟೂರ ಸ್ವಾಗತ ನೀಡಿ, ಅವರ ತ್ಯಾಗ, ಸೇವೆ ಹಾಗೂ ದೇಶಭಕ್ತಿಗೆ ಗೌರವ ಸಲ್ಲಿಸೋಣ. ರಾಷ್ಟ್ರಭಕ್ತರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ವೀರ ಯೋಧನಿಗೆ ಅದ್ಧೂರಿ ಹುಟ್ಟೂರ ಸ್ವಾಗತ ನೀಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಎಂದು ಪ್ರಟಕಟಣೆಯಲ್ಲಿ ತಿಳಿಸಲಾಗಿದೆ.












