ಬಿ.ಎಸ್ ಕುಲಾಲ್ ʼನುಡಿತರ್ಪಣʼ

ಪುತ್ತೂರು : ಇಲ್ಲಿನ ಕುಲಾಲ ಸಮಾಜ ಸೇವಾ ಸಂಘ (ರಿ.) ಇದರ ಮಾಜಿ ಅಧ್ಯಕ್ಷ, ಹಾಲಿ ಸಮಿತಿಯ ಗೌರವ ಅಧ್ಯಕ್ಷ ಮತ್ತು ನಿವೃತ್ತ ತಹಸೀಲ್ದಾರ್ ಬಿ.ಎಸ್ ಕುಲಾಲ್ ಆಗಸ್ಟ್‌ 30 ರಂದು ನಿಧನರಾಗಿದ್ದು, ಇವರಿಗೆ ಸೆಪ್ಟೆಂಬರ್‌ 10 ರಂದು ಕುಲಾಲ ಸಮಾಜ ಸೇವಾ ಸಂಘ (ರಿ.) ಪುತ್ತೂರು ಇದರ ವತಿಯಿಂದ ನುಡಿ ತರ್ಪಣ ಕಾರ್ಯಕ್ರಮ ಸಂಘದ ಕಚೇರಿ ಪುತ್ತೂರಿನ ಕುಲಾಲ ಭವನದಲ್ಲಿ ನಡೆಯಿತು.

ನುಡಿತರ್ಪಣ ಕಾರ್ಯಕ್ರಮದಲ್ಲಿ ಕೃಷ್ಣ ಕುಲಾಲ್ ಅಳಿಕೆ ಇವರು ಮಾತನಾಡಿ ಹಿರಿಯರಾದ ಬಿ ಎಸ್ ಕುಲಾಲರು ಕುಲಾಲ ಸಮಾಜ ಮಾತ್ರವಲ್ಲದೆ ಸರ್ವ ಸಮಾಜಕ್ಕೂ ಒಳಿತನ್ನು ಬಯಸಿದ ನೇರ ನಡೆ ನುಡಿಯ ವ್ಯಕ್ತಿಯಾಗಿದ್ದರು. ಸಮಾಜದ ಪ್ರತಿ ಓರ್ವರಿಗೂ ಸತ್ಪತ ತೋರಿದ ಹಿರಿಯ ಚೇತನ. ಇವರ ಹಾದಿಯಲ್ಲಿ ನಾವು ನಡೆದಾಗ ಅವರಿಗೆ ನಿಜವಾದ ಗೌರವ ತೋರಿದಂತೆ ಎಂದರು.

Advertisement

ಕುಲಾಲ ಸಮಾಜ ಸೇವಾ ಸಂಘ (ರಿ.) ಪುತ್ತೂರು ಇದರ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಅರಣ್ಯಧಿಕಾರಿ ಕೃಷ್ಣಪ್ಪ ಕೆ. ಮಾತನಾಡಿ ಬಿ.ಎಸ್ ಕುಲಾಲರು ಪುತ್ತೂರು ಕುಲಾಲ ಸಂಘದ ಕಟ್ಟಡ ಹಾಗೂ ಕುಂಬಾರರ ಗುಡಿ ಕೈಗಾರಿಕೆ ಸಂಘ ಪುತ್ತೂರು ಇದರ ಕಟ್ಟಡ ನಿರ್ಮಾಣ ಮಾಡುವಲ್ಲಿ ಹಾಗೂ ಸಮಾಜದ ಏಳಿಗೆಗಾಗಿ ನಿಷ್ಕಲ್ಮಶ ಮನಸ್ಸಿನಿಂದ ದುಡಿದ ಹಿರಿಯ ಚೇತನ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಾಲ ಸಂಘ ಪುತ್ತೂರು ಇದರ ಮಾಜಿ ಅಧ್ಯಕ್ಷ ಶಿವಪ್ಪ ಮೂಲ್ಯ ಸಂಪ್ಯ, ನಿಕಟಪೂರ್ವ ಅಧ್ಯಕ್ಷರುಗಳಾದ ನವೀನ್ ಕುಲಾಲ್ ಪುತ್ತೂರು, ಮಾಜಿ ಅಧ್ಯಕ್ಷ ಡಾ || ಚಂದ್ರಶೇಖರ ಕೆ, ಜನಾರ್ಧನ ಬಂಗೇರ ಸಿಟಿಗುಡ್ಡೆ, ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪುರಸ್ಕೃತ ಶ್ರೀಮತಿ ಶುಭಲತಾ ಹಾರಾಡಿ ನುಡಿ ತರ್ಪಣ ಸಲ್ಲಿಸಿದರು.

ಬಿ.ಎಸ್.‌ ಕುಲಾಲ್‌ ಅವರ ಉತ್ತರಕ್ರಿಯೆಯು ಸೆಪ್ಟೆಂಬರ್‌ 11 ಶುಕ್ರವಾರ ಮಧ್ಯಾಹ್ನ 11.45ಕ್ಕೆ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರದ ಜ್ಞಾನ ಮಂದಿರ ಸಭಾಂಗಣದಲ್ಲಿ ನಡೆಯಲಿದೆ.

ವೇದಿಕೆಯಲ್ಲಿ ಬಿ ಎಸ್ ಕುಲಾಲ್ ಇವರ ಕಿರಿಯ ಪುತ್ರರಾದ ಗೋಕುಲ್ ದಾಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸುಧಾಕರ್ ಕುಲಾಲ್ ನಡುವಾಲ್, ಕ್ರೀಡಾ ಕಾರ್ಯದರ್ಶಿ ಹರೀಶ್ ಕುಲಾಲ್ ಶೇವಿರೆ, ಕಾರ್ಯಕಾರಿ ಸಮಿತಿ ಸದಸ್ಯ ಜಯಾನಂದ ಸಿ ಎಷಚ್, ವಸಂತ್ ಅಕಾಯಿ, ವಸಂತ ಕುಲಾಲ್ ಕಾರೆಕಾಡ್, ಕೃಷ್ಣ ಕುಲಾಲ್ ಮಚ್ಚಿಮಲೆ, ಸಂಘದ ಮಾಜಿ ಕೋಶಾಧಿಕಾರಿ ಶ್ರೀಮತಿ ಚಿತ್ರಲೇಖ ಬಲ್ನಾಡ್, ಸೇಡಿಯಾಪು ಗ್ರಾಮ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಸಂತೋಷ್, ಯಶವಂತ ಪಿ ವಿ ಉರ್ಲಾಂಡಿ, ರುಕ್ಮಯ್ಯ ಕುಲಾಲ್ ಬಲ್ನಾಡ್, ಬಾಬು ಗೆಣಸಿನ ಕುಮೇರು, ನಾಗರಾಜ್ ಸಿಟಿಗುಡ್ಡೆ, ರೇಷ್ಮಾ ಕಾರೆಕಾಡ್, ಸಹನಾ ಮಚ್ಚಿಮಲೆ ಹಾಗೂ ಸಮಾಜದ ಭಾಂದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಿ.ಎಸ್ ಕುಲಾಲ್ ಇವರ ಭಾವಚಿತ್ರಕ್ಕೆ ಪುಸ್ಪಾರ್ಚನೆ ಮಾಡಿ, ಮೌನ ಪ್ರಾರ್ಥನೆ ದಲ್ಲಿಸಲಾಯಿತು. ವಿಶ್ವನಾಥ ಕುಲಾಲ್ ಮಿತ್ತೂರು ಇವರು ಅಕ್ಷರಾಂಜಲಿ ಸಲ್ಲಿಸಿದರು. ಕುಲಾಲ ಸಂಘ ಪುತ್ತೂರು ಇದರ ಕಾರ್ಯದರ್ಶಿ ತೇಜಕುಮಾರ್ ಕುಲಾಲ್ ಎನ್ ಕಾರ್ಯಕ್ರಮ ನಿರೂಪಿಸಿದರು.

Share this article

You cannot copy content of this page