ಪಟಾಕಿ ಸಿಡಿಸಲು ಸ್ಪೋಟಕ ಮಾರ್ಗಸೂಚಿ! ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಅವಕಾಶ!!

ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆ ವಿಧಾನಸೌಧದಲ್ಲಿ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿದ್ದು, ಪಟಾಕಿ ಕುರಿತು ಇಲಾಖೆಯ ಹೊರಡಿಸಿರೋ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಶದಾದ್ಯಂತ ನವೆಂಬರ್ 8 ರಿಂದ ನವೆಂಬರ್ 10 ರವರೆಗೆ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತೆ. ಹೀಗಾಗಿ ಸರ್ವೋಚ್ಚ ನ್ಯಾಯಲಯದ ಆದೇಶವನ್ನ ಪಾಲಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.

Advertisement

ಜನ ಸಾಮಾನ್ಯರಿಗೆ ದೀಪಾವಳಿ ಹಬ್ಬದ ದಿನಗಳಲ್ಲಿ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದ್ದು, ಉಳಿದ ಸಮಯದಲ್ಲಿ ಪಟಾಕಿಗಳನ್ನ ಸ್ಪೋಟಿಸುವುದು ನಿಷೇಧ ಮಾಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ. ಸರ್ವೋಚ್ಚ ನ್ಯಾಯಲಯದ ಆದೇಶವನ್ನ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಟಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಚಾಚು ತಪ್ಪದೇ ಪಾಲಿಸುವಂತೆಯೂ ಸೂಚನೆ ನೀಡಲಾಗಿದೆ.

Advertisement
Advertisement

ಪಟಾಕಿಗಳಲ್ಲಿ ಮೆಟಲ್ ಬಳಸುತ್ತಾರೆ ಹಾಗೇ, ಸೋಡಿಯಂ, ಬೇರಿಯಂ, ಕಾಪರ್, ಆಲ್ಯೂಮಿನಿಯಂ ಬಳಕೆ ಆಗುತ್ತೆ. ಹೀಗಾಗಿ ಹಸಿರು ಪಟಾಕಿ ತರೋದು ಉತ್ತಮ. ಈ ಗ್ರೀನ್ ಪಟಾಕಿಯಲ್ಲಿ ಶೇ30ರಷ್ಟು ಮೆಟಲ್ ಅಂಶ ಕಡಿಮೆ ಇರುತ್ತೆ ಎಂದು ಸಚಿವರು ಸಲಹೆ ನೀಡಿದ್ರು. ಹಾಗೇ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶದಂತೆ ಕೆಲವೊಂದಿಷ್ಟು ಮಾರ್ಗಸೂಚಿ ತಂದಿದ್ದೇವೆ ಎಂದು ಸಚಿವರು ತಿಳಿಸಿದ್ದಾಗಿ ವರದಿಯಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page