ನಾನು ಹೇಳಿದ ಮೇಲೆ 60 ರೂ.ಗೆ ಎರಡು ಲಡ್ಡು ಕೊಡಲೇಬೇಕು! ಹಾಸನಾಂಬೆ ಜಾತ್ರೆಯಲ್ಲಿ ಸಚಿವ ಶೀವಲಿಂಗೇಗೌಡರನ್ನು ಕುಪಿತಗಳಿಸಿದ ಲಡ್ಡು!!

ಹಾಸನಾಂಬ ಜಾತ್ರೆಯಲ್ಲಿ ನೂರು ರೂಪಾಯಿಗೆ ಎರಡು ಲಡ್ಡುಗಳನ್ನು ಮಾರಾಟ ಮಾಡುತ್ತಿದ್ದವರ ವಿರುದ್ಧ ಸಚಿವ ಕೆ.ಎಂ ಶಿವಲಿಂಗೇಗೌಡ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಿಯ ದರುಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿ ಪ್ರಸಾದವಾಗಿ ನೀಡುವ ಲಡ್ಡುವಿನ ದರವನ್ನು ನೂರು ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಜಿಲ್ಲಾಡಳಿತ ಹಾಗೂ ದೇವಾಲಯದ ಅಧಿಕಾರಿಗಳ ನಿರ್ಧಾರಕ್ಕೆ ಶಿವಲಿಂಗೇಗೌಡ ವಿರೋಧ ವ್ಯಕ್ತಪಡಿಸಿದ್ದು, ಲಡ್ಡು ಬೆಲೆಯನ್ನು 60 ರೂಪಾಯಿಗೆ ಇಳಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವಂತೆ ಸೂಚನೆ ನೀಡಿದ್ದಾರೆ.

Advertisement
Advertisement

ಈ ವೇಳೆ 60 ರೂಪಾಯಿಗೆ ಎರಡು ಲಡ್ಡು ಕೊಡಬೇಕು. ಅದೇ ಸರಿ. ನಾನೇ ಸರ್ಕಾರ ನಾನು ಹೇಳಿದ ಮೇಲೆ ಫೈನಲ್‌ ಎಂದು ಸಿಟ್ಟಾಗಿದ್ದಾರೆ. ದೇವಾಲಯದ ಸುತ್ತಮುತ್ತ ಪರಿಶೀಲನೆ ವೇಳೆ ನೂರು ರೂಪಾಯಿಗೆ ಪ್ರಸಾದ ಮಾರಾಟ ಆಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಟೆಂಡರ್‌ ಪಡೆದ ಇಸ್ಕಾನ್‌ ಸಂಸ್ಥೆಗೆ ಕರೆ ಮಾಡಿ, ನಾನು ಮಿನಿಸ್ಟರ್ ಮಾತನಾಡುತ್ತಿದ್ದೇನೆ. 60 ರೂ.ಗೆ ಎರಡು ಲಾಡುಗಳನ್ನು ಮಾರಾಟ ಮಾಡಬೇಕು. 1000 ರೂ. 300 ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ದರ್ಶನ ಮಾಡಿದವರಿಗೆ ಉಚಿತವಾಗಿ ಲಾಡು ನೀಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page