ಹತ್ತು ಕೋಟಿ ರೈತರ ಅಕೌಂಟ್‌ಗೆ 18,000ಕ್ಕೂ ಅಧಿಕ ಮೊತ್ತ ಜಮೆ! ಪಿ.ಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ!!

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿಗಳನ್ನು ಜಮೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Advertisement

ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡಿ, ಹತ್ತು ಕೋಟಿಯಷ್ಟು ರೈತರಿಗಾಗಿ 18,000 ಕೋಟಿ ರೂಗೂ ಅಧಿಕ ಮೊತ್ತವನ್ನು ಬ್ಯಾಂಕ್ ಅಕೌಂಟ್​ಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿರುವ ಮಾಹಿತಿ ಪ್ರಕಾರ 24ನೇ ಕಂತಿನ ಹಣವನ್ನು 9.34 ಕೋಟಿಗೂ ಅಧಿಕ ರೈತರಿಗೆ ನೀಡಲಾಗಿದೆ. ಪ್ರತೀ ಫಲಾನುಭವಿ ರೈತರ ಬ್ಯಾಂಕ್ ಅಕೌಂಟ್​ಗೆ 2,000 ರೂ ಹಣ ನೇರವಾಗಿ ಜಮೆ ಆಗಲಿದೆ. ಸರ್ಕಾರ ಈ 24ನೇ ಕಂತಿನ ಹಣ ವಿತರಣೆಗೆ 18,000 ಕೋಟಿ ರೂ ವೆಚ್ಚ ಮಾಡಿದೆ. 2018-19ರಲ್ಲಿ ಜಾರಿಗೆ ಬಂದ ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಹಾಕಿರುವ ಒಟ್ಟು ಹಣವು 4.5 ಲಕ್ಷ ಕೋಟಿ ರೂಗೂ ಅಧಿಕ. ಬನಸ್ಕಾಂತ ಸಮಾವೇಶದಲ್ಲಿ ಮೋದಿ ಈ ಮಾಹಿತಿ ನೀಡಿದರು. ಹಾಗೆಯೇ, ರೈತರಿಗೆ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲು ಸರ್ಕಾರ 16 ಲಕ್ಷ ಕೋಟಿ ರೂ ವ್ಯಯಿಸಿದೆ ಎಂದೂ ಮೋದಿ ತಿಳಿಸಿದರು ಎಂದು ವರದಿಯಾಗಿದೆ.

Advertisement
Advertisement

ನಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ರೈತರು ತಮ್ಮ pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಫಾರ್ಮರ್ಸ್‌ ಕಾರ್ನರ್‌ಗೆ ಕ್ಲಿಕ್‌ ಮಾಡಿ. ನಂತರ ಬೆನಿಫಿಶಿಯರಿ ಲಿಸ್ಟ್‌ ಕ್ಲಿಕ್‌ ಮಾಡಿ. ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ಕೆ ಮಾಡಿ. ಅದರಲ್ಲಿ ಫಲಾನುಭವಿಗಳ ಪಟ್ಟಿ ಇರುತ್ತದೆ. ಅದರಲ್ಲಿ ಹೆಸರು ಇದೆಯಾ ಎಂದು ಪರಿಶೀಲಿಸಬಹುದು ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page