ಇಸ್ರೇಲ್‌ ಚುನಾವಣಾ ಫಲಿತಾಂಶ ಘೋಷಣೆ! ಬಹುಮತವಿಲ್ಲದೆ ನತನ್ಯಾಹು ಪರದಾಟ!!

ಇಸ್ರೇಲ್‌ : 120 ಸದಸ್ಯ ಬಲದ ಇಸ್ರೇಲ್ ಸಂಸತ್ ಚುನಾವಣಾ ಅಂತಿಮ ಫಲಿತಾಂಶವನ್ನು ಸೆಂಟ್ರಲ್ ಇಲೆಕ್ಷನ್ಸ್ ಕಮಿಟಿ ಘೋಷಿಸಿದ್ದು, ನೆತನ್ಯಾಹು ನೇತೃತ್ವದ ಲಿಕುಡ್ ಮೈತ್ರಿಕೂಟ 53 ಸ್ಥಾನ ಪಡೆದು, ಬಹುಮತಕ್ಕೆ 8 ಸ್ಥಾನಗಳ ಕೊರತೆ ಕಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Advertisement

ಮತ್ತೊಂದೆಡೆ ವಿಪಕ್ಷ ಐಸೆನ್ ಕೋಟ್ ಮೈತ್ರಿಕೂಟ 48 ಸ್ಥಾನಗಳಿಸಿದ್ದು, ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ಚುನಾವಣೆಯಲ್ಲಿ 19 ಸ್ಥಾನ ಗಳಿಸಿರುವ ಅರಬ್ ಬೆಂಬಲಿತ ಪಕ್ಷಗಳು ಕಿಂಗ್ ಮೇಕರ್‌ಗಳಾಗಿ ಹೊರಹೊಮ್ಮಿರುವುದಾಗಿ ವರದಿ ವಿವರಿಸಿದೆ.
ಅಂತಿಮ ಚುನಾವಣ ಫಲಿತಾಂಶದ ಪ್ರಕಾರ, ಲಿಕುಡ್ 27 ಸ್ಥಾನಗಳನ್ನು, ಯಶಾರ್ 21, ಬಿ’ಯಾಚಾದ್ 12, ಜಾಯಿಂಟ್ ಲಿಸ್ಟ್ 11, ದಿ ಡೆಮೋಕ್ರಾಟ್ಸ್ 8, ರಾಮ್ 8, ಇಸ್ರಾಯೆಲ್ ಬೇಟೆನು 7. ಯುನೈಟೆಡ್ ತೋರಾ ಜುದಾಯಿಸಂ 7, ಒಟ್ಟಾಯೆಹುದಿತ್ 7, ಶಾಸ್ 6 ಮತ್ತು ರಿಲಿಜಿಯಸ್ ಜಿಯೋನಿಸಂ 6 ಸ್ಥಾನಗಳನ್ನು ಪಡೆದಿವೆ ಎಂದು ವರದಿಯಾಗಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page