ಬದರೀನಾಥ್‌ನ ಹೆಲಿಕಾಪ್ಟರ್‌ ಪತನದಲ್ಲಿ ಐದು ಮಂದಿ ಕನ್ನಡಿಗರು ಸಾವು! ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಲಿದ್ದ ಪೊಲೀಸ್‌ ಅಧಿಕಾರಿ ಅರುಣ್ ಸಾಲಂಕೆ!!

ಬದರೀನಾಥ್‌ : ಉತ್ತರಾಖಂಡದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಹೆಲಿಕಾಪ್ಟರ್ ಪತನಗೊಂಡು ಐದು ಮಂದಿ ಕನ್ನಡಿಗರು ಸಾವನ್ನಪ್ಪಿದ್ದಾರೆ. ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರಿನ ಐವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಉತ್ತರಾಖಂಡ್‌ನ ಜೋಶಿಮಠ ಬಳಿ ಈ ದುರ್ಘಟನೆ ಸಂಭವಿಸಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆಹಚ್ಚಲಾಗಿದೆ. ಬೆಂಗಳೂರು ಮೂಲದ ಅರುಣ್‌, ಹೆಚ್‌.ಎಸ್‌ ನಾಗರಾಜ್‌ ಪ್ರತಾಪ್‌, ಸುಧೀರ್‌‌ ಕೆ ಹಾಗೂ ಶಂಕರ್‌ಗೌಡ ವಿಬಿ ಹೆಲಿಕಾಪ್ಟರ್‌ ಕ್ಯಾಪ್ಟನ್‌ ಹಿಮಾಂಶು ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

ಸಿಸಿಬಿ ಇನ್ಸ್​ಪೆಕ್ಟರ್ ಅರುಣ್ ಸಾಲಂಕೆ, ವಕೀಲರಾದ ಶಂಕರೇಗೌಡ, ಸುದೀರ್ ಹಾಗೂ ನಾಗರಾಜ್‌ ಪ್ರತಾಪ್‌ ಪ್ರವಾಸಕ್ಕೆಂದು ತೆರಳಿದ್ದರು. ಕೇದಾರನಾಥ, ಬದ್ರಿನಾಥ್ ದೇವಸ್ಥಾನಕ್ಕೆಂದು ತೆರಳಿದ್ದರು. ಆದ್ರೆ, ದುರಾದೃಷ್ಟವಶಾತ್​​ ಹೆಲಿಕಾಪ್ಟರ್ ಪತನದಿಂದ ಐವರು ಸ್ನೇಹಿತರು ಸಾವನ್ನಪ್ಪಿದ್ದು, ಸದ್ಯ, ಉತ್ತರಾಖಂಡ್ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page