ಪುತ್ತೂರು : ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ನಡೆಯುವ 31ನೇ ಸಾರ್ವಜನಿಕ ಗಣೇಶೋತ್ಸವ ಸೆಪ್ಟೆಂಬರ್ 13 ಭಾನುವಾರ ಮತ್ತು 14 ಸೋಮವಾರದಂದು ನಡೆಯಲಿದೆ.
ಭಾನುವಾರ ಗಣಪತಿ ಪ್ರತಿಮೆ ಆಗಮಿಸಲಿದೆ. ಸೋಮವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಯಂಕಾಲ ಸಭಾ ಕಾರ್ಯಕ್ರಮ ಜರುಗಳಿದೆ.
ಸಂಜೆ 6 ಗಂಟೆಯಿಂದ ಗಣಪತಿ ವಿಸರ್ಜನೆ ನಡೆಯಲಿದ್ದು, ಶೋಭಾಯಾತ್ರೆಯ ಮೆರುಗಿನಲ್ಲಿ ಕುಣಿತ ಭಜನೆ, ಸ್ಥಳೀಯ ಸಂಘ ಸಂಸ್ಥೆಗಳಿಂದ ವಿಶೇಷ ಆಕರ್ಷಣೆಗಳು ಇರಲಿದೆ. ಶೋಭಾಯಾತ್ರೆಯು ಕಾರ್ಲ ಭಜನಾ ಮಂದಿರದಿಂದ ಅಮೈವರೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













