ರೋಗಗಳಿಗೆ ರಾಮಬಾಣ ಕೊಡಿಪ್ಪಾಡಿ ತೀರ್ಥ

ಈ ಕ್ಷೇತ್ರದಲ್ಲಿ ತೀರ್ಥ ಸ್ಥಾನ ಮಾಡಿದರೆ ಆಣಿ, ಕೇಡು ಮುಂತಾದ ಚರ್ಮ ರೋಗಗಳಿಗೆ ರಾಮಬಾಣ, ಹೌದು, ಈ ಕ್ಷೇತ್ರವಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೊಡಿಪ್ಪಾಡಿಯಲ್ಲಿ. ಜನಾರ್ದನ ದೇವಸ್ಥಾನ ಕೊಡಿಪ್ಪಾಡಿ ಎಂದ ಕೂಡಲೇ ನೆನಪಾಗುವುದೇ ಕೊಡಿಪ್ಪಾಡಿ ತೀರ್ಥ.

ತೀರ್ಥ ಸ್ನಾನ (ಕೊಡಿಪ್ಪಾಡಿ ತೀರ್ಥ) ಸೆಪ್ಟೆಂಬರ್‌ 11 ಶುಕ್ರವಾರದಂದು ನಡೆಯಲಿದೆ. ಅನೇಕ ಕಾರಣಗಳಿಗೆ ಹರಕೆ ಹೇಳಿದ ಭಕ್ತರು ತೀರ್ಥ ಅಮಾವಾಸ್ಯೆಯ ದಿವಸ ಮಾತ್ರ ಸ್ನಾನವನ್ನು ಮಾಡಬೇಕು. ಬಾಕಿ ದಿವಸದಲ್ಲಿ ಸ್ನಾಮಾಡಬಾರದು ಎಂಬ ತಪ್ಪು ಕಲ್ಪನೆ ಇಲ್ಲಿದೆ. ಶ್ರೀ ಕ್ಷೇತ್ರದಲ್ಲಿ ವರ್ಷದ 365 ದಿವಸವೂ ಕ್ಷೇತ್ರ ತೆರೆದಿರುವ ಸಮಯದಲ್ಲಿ ಯಾರೂ ಕೂಡ ಭಕ್ತರು ಸ್ನಾನವನ್ನು ಮಾಡಿ ತಮ್ಮ ಹರಕೆಯನ್ನು ತೀರಿಸಬಹುದು. ಆದರೆ ವರ್ಷಂಪ್ರತಿ ಜರಗುವ ತೀರ್ಥ ಸ್ನಾನ (ಕೊಡಿಪ್ಪಾಡಿ ತೀರ್ಥ) ಬೇರೆ ದಿವಸಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ.

Advertisement

ತೀರ್ಥ ಅಮಾವಾಸ್ಯೆ ಎಂಬುದು ಗಂಗಾ ಮಾತೆ ಆಚಾರ್ಯ ಮಧ್ವರ ಭಕ್ತಿಗೆ ಒಲಿದು ಪ್ರತ್ಯಕ್ಷವಾದ ದಿವಸವಾಗಿಧೆ. ಈ ಕಾರಣಕ್ಕಾಗಿ ತೀರ್ಥ ಸ್ನಾನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಧೆ. ಶ್ರೀ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಪ್ರತೀ ದಿವಸವು ಬೆಳ್ಳಿಯ ಕೊಡದಲ್ಲಿ ಈ ತೀರ್ಥವನ್ನು ಕೊಂಡುಹೋಗಿ ಮೂಲಬಿಂಬಕ್ಕೆ ಅಭಿಷೇಕ ಮಾಡಬೇಕು ಎಂದು ಕಂಡುಬಂದಿರುವುದು ಈ ಕ್ಷೇತ್ರದ ಮಹತ್ವವನ್ನು ಸಾರುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟಸಾಧ್ಯ ಎನ್ನುವ ಕಾರಣಕ್ಕೆ ತೀರ್ಥ ಅಮಾವಾಸ್ಯೆಯ ದಿವಸ ಮಾತ್ರ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಆದ್ದರಿಂದ ತೀರ್ಥ ಸ್ನಾನದ ಬಗ್ಗೆ ಯಾವುದೇ ಗೊಂದಲವಿಲ್ಲದೆ ತೀರ್ಥದ ಅಮಾವಾಸ್ಯೆಗೆ ಬರಲು ಅನಾನುಕೂಲವಾದ ಭಕ್ತರು ತಮ್ಮ ಅನುಕೂಲದ ದಿವಸದಲ್ಲಿ ಬಂದು ಸ್ನಾನವನ್ನು ಮಾಡಿ ತಮ್ಮ ಹರಕೆಯನ್ನು ಅರ್ಪಿಸಬಹುದು. ಜೊತೆಗೆ ಅಮವಾಸ್ಯೆ ತೀರ್ಥ ಸ್ನಾನದ ದಿನದಂದು ಅನ್ನಸಂತರ್ಪಣೆಯೂ ನಡೆಯುತ್ತದೆ.

Share this article

You cannot copy content of this page